ಕೋಮು ಉದ್ವಿಗ್ನತೆಯನ್ನು ತಡೆಗಟ್ಟಲು ರೂರ್ಕಿಯಲ್ಲಿ ಧಾರ್ಮಿಕ ಸಭೆಯನ್ನು ನಿರ್ಬಂಧಿಸಲು ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 144 ಅನ್ನು ವಿಧಿಸಲಾಯಿತು. ಧಾರ್ಮಿಕ ಸಭೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಸ್ವೀಕಾರಾರ್ಹವಲ್ಲದ ಹೇಳಿಕೆಗಳು (ದ್ವೇಷ ಅಪರಾಧಗಳು) ಆಗದಂತೆ ನೋಡಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ಉತ್ತರಾಖಂಡ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 144 ಬ್ರಿಟಿಷ್ ವಸಾಹತುಶಾಹಿ ಕಾಲದ ಕಾನೂನಾಗಿದ್ದು, ಇದನ್ನು ಮೊದಲು ಕ್ರಿಮಿನಲ್ ಪ್ರೊಸೀಜರ್ ಕೋಡ್1882 ರಲ್ಲಿ ತರಲಾಗಿತ್ತು ಮತ್ತು ನಂತರ 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ ನಲ್ಲಿ ಉಳಿಸಿಕೊಳ್ಳಲಾಯಿತು.ಈ ಸೆಕ್ಷನ್ ಸಂಭವನೀಯ ಅಪಾಯ ಮತ್ತು ಉಪದ್ರವದ ಮತ್ತು ತುರ್ತು ಪ್ರಕರಣಗಳನ್ನು ತಡೆಗಟ್ಟ...